Former chief minister of Karnataka, and BJP leader S M Krishna's sudden participation in BJP's Parivarthana rally in Mandya creates some curiosity among Kannadigas. Because he did not participated in the rally before. Is S M Krishna preparing to gain Vokkaliga votes in Mandya and Mysuru belt?

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ನಡೆಸಿದ ಪರಿವರ್ತನಾ ಯಾತ್ರೆಗೆ ಹೆಚ್ಚು ಕಳೆ ಬಂದಿದ್ದು, ಮೊನ್ನೆ ಮಂಡ್ಯದಲ್ಲಿ ನಡೆದ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಭಾಗವಹಿಸಿದಾಗ.

ಕಾಂಗ್ರೆಸ್ ನ ಹಿರಿಯ, ಪ್ರಭಾವಿ ನಾಯಕ ಎನ್ನಿಸಿದ್ದ ಕೃಷ್ಣಾ ಅವರು ಕಳೆದ ವರ್ಷ ಬಿಜೆಪಿಗೆ ಸೇರುತ್ತಿದ್ದಂತೆಯೇ ಬಿಜೆಪಿಗೆ ಆನೆಬಲ ಸಿಕ್ಕಂತಾಯ್ತು ಎಂದುಕೊಂಡಿದ್ದವರೇ ಹಲವರು. ಆದರೆ ಪರಿವರ್ತನಾ ಯಾತ್ರೆಯಲ್ಲೆಲ್ಲೂ ಕಾಣಿಸಿಕೊಳ್ಳದೆ, ನಿರ್ಪಪ್ತರಾಗಿಯೇ ಉಳಿದ ಕೃಷ್ಣ ಅವರ ನಡೆ ಯಾರೊಬ್ಬರಿಗೂ ಅರ್ಥವಾಗಿರಲಿಲ್ಲ.

ಜ.20 ರಂದು ಮಂಡ್ಯದಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಖುದ್ದು ಹಾಜರಾಗುವ ಮೂಲಕ ತವರಿನ ಮೇಲಿನ ತಮ್ಮ ಪ್ರೀತಿಯನ್ನು ಎಸ್.ಎಂ.ಕೃಷ್ಣ ವ್ಯಕ್ತಪಡಿಸಿದ್ದಾರೆ. ಮೈಸೂರು, ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಬಿಜೆಪಿ ಪ್ರಭಾವ ಹೆಚ್ಚಿಸಲು ಎಸ್.ಎಂ.ಕೃಷ್ಟ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶ ಬಿಜೆಪಿಯದ್ದು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಿ ಕಾಂಗ್ರೆಸ್ ನ ಭದ್ರ ಕೋಟೆ ಎನ್ನಿಸಿರುವ ಈ ಭಾಗದಲ್ಲಿ ಬಿಜೆಪಿ ತನ್ನ ಆಧಿಪತ್ಯ ಸ್ಥಾಪಿಸುವುದು ಸುಲಭವಲ್ಲ.